Karnataka BJP president B.S.Yeddyurappa asked 5 questions for Chief Minister Siddaramaiah. After Prime Minister of India Narendra Modi speech in Bengaluru on February 4, 2018. Siddaramaiah asked him to walk the talk posing four questions. <br /> <br /> <br />ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಡುವಿನ ಟ್ವಿಟರ್ ವಾರ್ ಮುಂದುವರೆದಿದೆ. ಸಿದ್ದರಾಮಯ್ಯಗೆ ಮತ್ತೆ 5 ಪ್ರಶ್ನೆಗಳನ್ನು ಯಡಿಯೂರಪ್ಪ ಕೇಳಿದ್ದಾರೆ. ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಂದು ಹೋದ ಮೇಲೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ವಾಕ್ಸಮರ ನಡೆಯುತ್ತಿದೆ. ಅದರಲ್ಲೂ ಮೋದಿ ಭಾಷಣದ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. #Dare2Answer ಎಂಬ ಹ್ಯಾಷ್ ಟ್ಯಾಗ್ ಬಳಸಿ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳಿಗೆ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಫೆ. 6ರಂದು ಯಡಿಯೂರಪ್ಪ 5 ಪ್ರಶ್ನೆ ಕೇಳಿದ್ದರು. ಬುಧವಾರ ರಾತ್ರಿ ಮತ್ತೆ 5 ಪ್ರಶ್ನೆಗಳನ್ನು ಕೇಳಿದ್ದಾರೆ. ಕರ್ನಾಟಕದ ಸರ್ಕಾರದ ವೈಫಲ್ಯತೆಗಳನ್ನು ಮುಂದಿಟ್ಟು ಸಿದ್ದರಾಮಯ್ಯ ಅವರೇ ಉತ್ತರ ಕೊಡಿ ಎಂದು ಯಡಿಯೂರಪ್ಪ ಒತ್ತಾಯಿಸಿದ್ದಾರೆ. <br />